" ಗುಟ್ಟು ಬಿಟ್ಟವರ್ಯಾರು ? "
ಅವಳಿಗೊಂದು ಗುಟ್ಟು ಹೇಳಿ
'ಯಾರಿಗೂ ಹೇಳಬೇಡ ಎಂದೆ .
ಏಕೆಂದರೆ ಅವಳು ನನಗೆ
ತುಂಬಾ ಬೇಕಾದವಳು .
ಅವಳಿಗೆ ಯಾರೋ ತುಂಬಾ
ಬೇಕಾದವರಿರಬೇಕು ,
'ನಿನಗೆ ಮಾತ್ರ ಹೇಳಿದ್ದೇನೆ ಯಾರಿಗೂ ಹೇಳಬೇಡ '
ಎಂದು ಆಕೆ ಅವರಿಗೆ ಹೇಳಿದಳು .
ಆ ಅವರಿಗೆ ಮತ್ತೆ ಯಾರೋ
ಆ ಮತ್ಯಾರಿಗೋ ಇನ್ಯಾರೋ
ಈ ಇನ್ಯಾರಿಗೋ ಬೇರೆಯಾರೋ .
ಒಂದು ದಿನ ,ನಾನ್ಯಾರಿಗೆ ಬೇಕಾಗಿದ್ದೇನೋ
ಅವರು ನನ್ನ ಕಿವಿಗೊಂದು ಗುಟ್ಟು ಇಟ್ಟು,
'ಇದನ್ನು ಯಾರಿಗೂ ಹೇಳಬೇಡಿ' ಎಂದರು .
ಈ ಕಥೆಯ ದುರಂತವೆಂದರೆ :
ನನಗೆ ಮೊದಲೊಬ್ಬರು ಹೇಳಿದ್ದ ಗುಟ್ಟು,
ನಾನು ಅವಳಿಗೆ ಹೇಳಿದ ಗುಟ್ಟು ,
ಈಗ ನನಗೇ ಬೂಮರಾಂಗ್ ಆಗಿದ್ದು.
ಈಗ ನೀವು ಹೇಳಿ ,
ಹಾಗಾದರೆ ಇಲ್ಲಿ ಗುಟ್ಟು ಬಿಟ್ಟವರ್ಯಾರು ?
@ ಶಿವಾ@
No comments:
Post a Comment