Sunday, October 31, 2010

ಬೆತ್ತಲಾದವ !!!!


ಯಾರೋ ಹೇಳಿದ್ದರು ಆ ತಿರುಕಂಗೆ,
"ಬದುಕಲ್ಲಿ ಮುಖ್ಯ ಮಾನ ಮರ್ಯದೆ" ಎಂದು.
ತಿರಿದು ತಿಂದರೂ ಮರ್ಯಾದೆಗೆ
ಬದುಕುತ್ತಿದ್ದೇನೆಂದು ಆತ ಬೀಗುತ್ತಿದ್ದ.

ಬರುಬರುತ್ತ ಮೈಮೇಲ
ಬಟ್ಟೆ ಚಿಂದಿಯಾಯಿತು.
ಮಂದಿ ನೋಡಿ ಅಸಹ್ಯ ಪಟ್ಟರು.
ಮಕ್ಕಳು ಗುಪ್ತಾಂಗಗಳ ನೋಡಿ ನಕ್ಕರು.
ಬೀದಿ ನಾಯಿ ಮೈಮೇಲೆರಗತೊಡಗಿದವು.

ಚಿಂದಿಬಟ್ಟೆಯಿಂದ ಇಣುಕುವ
ಅಂಗಾಂಗಗಳನ್ನು ಮುಚ್ಚಲೆತ್ನಿಸಿದ ಆ ತಿರುಕ.
ಒಮ್ಮೊಮ್ಮೆ ಗೆದ್ದ, ಕೆಲವೊಮ್ಮೆ ಸೋತ.
ಇನ್ನು ವಿಕಸಿಸಲಸಾಧ್ಯವೆಂಬ ಸ್ತಿತಿಗೆ ಬಂತು
ಆ ತಿರುಕನ ಚಿಂದಿ ಬಟ್ಟೆ.

"ಫ್ಹುಟ್ ಪಾತ್ " ನಲ್ಲಿ ಮಲಗಿದ್ದ ಅವನನ್ನು
ರೇಗಿಸಿತೊಂದು ಪಡ್ಡೆ ಹುಡುಗರ ಗುಂಪು.
ತಿರುಕ ಸಹನೆ ಕಳೆದುಕೊಂಡಿದ್ದ
ಮೈಮೇಲಿದ್ದ ತುಂಡುಬಟ್ಟೆಯನ್ನೂ ಕಿತ್ತೆಸೆದ.
ಬಣ್ಣಬಣ್ಣದ ಸಮಾಜಕ್ಕೆ  ತನ್ನ ಬೆತ್ತಲೆ ಮೈಯೊಡ್ಡಿ ನಿಂತ.

ಹೀಗೆ ಬಟ್ಟಂಬಯಲಲ್ಲೇ ಬೆತ್ತಲಾದವ
ಮುಗ್ದ ಮಗುವಾದ.
ಬಟ್ಟೆಗೆಂದು ದೇವರಲ್ಲಿ ಮೊರೆದು ಮೊರೆದು ಸೊತಿದ್ದವ
ಕೊನೆಗೊಮ್ಮೆ ಬೆತ್ತಲಾದ.
ಮತ್ತು ಬೆತ್ತಲಾಗಿ ದೇವರೇ ತಾನಾದ.!!!

  ( ಬತ್ತಲಾಗದೆ ಬಯಲು ಸಿಕ್ಕದಿಲ್ಲಿ ಎಂಬ ಅಡಿಗರ ಸಾಲಿನಿಂದ ಪ್ರೆರಿತಗೊಂಡು ಬರೆದ ಕವನ )

( NMKRV COLLEGE BANGALORE ಇವರಿಂದ ಬಹುಮಾನ ಪಡೆದ ಕವನ )

                                           @ * ಶಿವೂ *@

ಸಾವು ..!



ನಿನ್ನ ಬಗ್ಗೆ ನನಗಿರುವ
ಭಯದಷ್ಟೇ
ನನ್ನ ಕಂಡರೆ ನಿನಗೆ
ವ್ಯಾಮೋಹವೇಕೆ ?

ನನ್ನ ಬದುಕು
ಅನಿಶ್ಚಿತವಾದಷ್ಟೇ
ನೀನು
ನಿಶ್ಚಿತವೇಕೆ ?


ನಿನ್ನಿಂದ ದೂರವಾಗಲು
ನಾ ಬಯಸಿದಷ್ಟೇ
ನನಗೆ ಹತ್ತಿರವಾಗಲು
ನೀ ಬಯಸುವೆಯೇಕೆ ?

ನಿನ್ನಿಂದ ನಾನು
ವಿಮುಖವಾಗುವಷ್ಟೆ ,
ನೀನು ನನ್ನನ್ನು ಅಪ್ಪಲು
ಬಯಸುವೆಯೆಕೆ ?

ನಿನ್ನ ಸುಳಿವು  ಸಿಕ್ಕು
ನಾನು ದೂರ ಓಡುವಾಗಲೆಲ್ಲ
ನೀನು ಬಿಡದೆ ನನ್ನನ್ನು
ಬೆಂಬತ್ತುವೆಯೇಕೆ ?

ನಾನೊಬ್ಬ Degnified ಆಗಿದ್ದರೂ
appointment ಇಲ್ಲದೇ
ಮನೆಗೆ ನುಗ್ಗುವಿಯೇಕೆ ?

ಎಂದಾದರೊಂದು ದಿನ
ನಾ ನಿನ್ನ ಸೇರಲೇಬೇಕಲ್ಲವೇ ?
ಅಲ್ಲಿಯ ತನಕ ನನ್ನ ತಂಟೆ
ನಿನಗೇಕೆ ?

ನಾನಾಗಿಯೇ ಬರುವ ತನಕ
ನೀ ಕಾಯುವುದಿಲ್ಲ ಏಕೆ ?
ಹಾಗೆ ನೀ ಕಾದರೆ ನಾನು ಬರುವುದಿಲ್ಲ
ಎಂಬುದೂ ನಿಗೆ ಗೊತ್ತೆ.......?!

              * ಶಿವೂ *

" ಯಾವಾಗ ? "

ಪ್ರಿಯೆ,
ನಿನ್ನ ನೆನಪಲ್ಲಿ
ನಾ ಕೊಟ್ಟ
ಮುತ್ತುಗಳೆಲ್ಲ ಇನ್ನೂ
ನನ್ನ ತಲೆದಿಂಬಿನಲ್ಲೇ ಇವೆ.

ಅವೆಲ್ಲ ನಿನ್ನ ಕೆನ್ನೆಗೆ
ವರ್ಗಾವಣೆಯಾಗುವುದು
ಯಾವಾಗ ?

ನಿನಗೆ ಬರೆಯಬೇಕೆಂದಿದ್ದ
ಅದೆಷ್ಟೋ ಪ್ರೇಮ ಪತ್ರಗಳು
ನನ್ನ ಪೆನ್ನಲ್ಲೇ ಉಳಿದುಬಿಟ್ಟಿವೆ.

ಅವೆಲ್ಲ ಹಾಳೆಗಿಳಿದು
ನಿನ್ನ ಕೈಸೇರುವುದು
ಯಾವಾಗ ?

                   * ಶಿವೂ*   

ಹನಿ-ಕಹಾನಿಗಳು


ಗೆಳತಿ,
ಇನ್ನು ನಿನ್ನ ಮರೆತು
ಬಿಡುವುದೇ ಸರಿ
ಆದರೆ ಹೇಗೆ ಮರೆಯಲಿ
ನೀನು ಕನಸಲ್ಲ
ನಿಜ.
***********

ಗೆಳತಿ,
ಅದೊಂದು ಪ್ರಶ್ನೆ ನೀನು ಕೇಳಲೇಬೆಡ
"ನನಗೊಂದು ಬದುಕು ?ಕೊಡುತ್ತೀಯಾ " ಎಂದು.
ಖಂಡಿತಾ ಹೇಳುತ್ತೇನೆ
ಈ ಬದುಕು ನನಗೆ ಅಂತಾ
ಏನೇನು ಕೊಡುತ್ತೋ ಅದನ್ನೆಲ್ಲ
ನಿನಗೂ ವಂಚನೆಯಿಲ್ಲದೇ ಕೊಡುತ್ತೇನೆ.
******************

ಪ್ರಿಯೆ,
ಏನಿಲ್ಲವೆಂದರೂ ದಿನ ಕಳೆಯುತ್ತಿದೆ
ನೀನಿಲ್ಲವೆಂದರೂ ಸಮಯ ನಿಲ್ಲುವುದಿಲ್ಲ.
ಆದರೆ..?
ನಿನ್ನ ನೆನಪು ಇಲ್ಲದ
ಒಂದರೆಗಳಿಗೆ ಕೂಡ ನನ್ನಿಂದ ತಪ್ಪಿಸಿಕೊಳ್ಳಲಾರದು.
********************
              @* ಶಿವೂ * @

Saturday, October 30, 2010

 
ಮೊದಲ ಮುತ್ತು
 
ಅಬ್ಬಾ! ಎಷ್ಟು ದಿನದಿಂದ ಕಾದಿದ್ದೆ
ಆ ಒಂದು ಮುತ್ತಿಗಾಗಿ .
ಎರಡು ಅದರಗಳ ಸ್ಪರ್ಶ
ನೀಡುವ ರೋಮಾಂಚನಕ್ಕಾಗಿ.
 
ಏನೆಲ್ಲಾ ಕೇಳಿದ್ದೆ,ಓದಿದ್ದೆ ,ನೊಡಿದ್ದೆ
ಮೊದಲ ಮುತ್ತಿನ ಬಗ್ಗೆ .
ನರನಾಡಿಗಳ ರಕ್ತದೊತ್ತಡ ಹೆಚ್ಚಿಸಿ ,
ಮೈನವಿರೇಳಿಸುವ ಆ ಅದರಗಳ ಬಗ್ಗೆ.
 
 
ಆ ನಯವಾದ, ಮೃದುವಾದ ಅದರಗಳೂ
ಈ ಅನುಭವಕ್ಕೇ ಕಾದಿದ್ದಿರಬೇಕು
ಅದೊಂದು ದಿನ ಬಂದೇ ಬಿಟ್ಟಿತು
ನನ್ನ ಕೆನ್ನೆಯನ್ನೂ ಅವಳ ಅದರಗಳನ್ನೂ
ಯಾರೂ ತಡೆಯುವಂತಿರಲಿಲ್ಲ.
 
ವಾಹ್! ಎಂಥಾ ರಸಾನುಭವ
ಈ ಮೊದಲ ಮುತ್ತಿನ ಅನುಭವ .
ಆಪಾದ ಮಸ್ತಕದವೆಗೂ ಕಂಪನ
ಹೇಳುವಂತಿಲ್ಲ ಪಡೆದೇ ತೀರಬೇಕು ಆ ಮತ್ತನ್ನ .
 
ಹೌದೂ ,
ನನ್ನ ಕೆನ್ನೆಗೆನೋ ಅದು ಮೊದಲ ಮುತ್ತು
ಅದು ನನಗೆ ಕಂಡಿತಾ ಗೊತ್ತು.
ಆದರೆ ಅವಳ ಅದರಗಳ ಬಗ್ಗೆ ಯಾರಿಗೆ ಗೊತ್ತು ???
 
                      @ಶಿವಾ@
" ಗುಟ್ಟು ಬಿಟ್ಟವರ್ಯಾರು ? "
 
ಅವಳಿಗೊಂದು ಗುಟ್ಟು ಹೇಳಿ 
'ಯಾರಿಗೂ ಹೇಳಬೇಡ ಎಂದೆ .
ಏಕೆಂದರೆ ಅವಳು ನನಗೆ 
ತುಂಬಾ ಬೇಕಾದವಳು .
 
ಅವಳಿಗೆ ಯಾರೋ ತುಂಬಾ
ಬೇಕಾದವರಿರಬೇಕು ,
'ನಿನಗೆ ಮಾತ್ರ ಹೇಳಿದ್ದೇನೆ ಯಾರಿಗೂ ಹೇಳಬೇಡ '
ಎಂದು ಆಕೆ ಅವರಿಗೆ ಹೇಳಿದಳು .
 
ಆ ಅವರಿಗೆ ಮತ್ತೆ  ಯಾರೋ 
ಆ ಮತ್ಯಾರಿಗೋ ಇನ್ಯಾರೋ 
ಈ ಇನ್ಯಾರಿಗೋ ಬೇರೆಯಾರೋ .
 
ಒಂದು ದಿನ ,ನಾನ್ಯಾರಿಗೆ ಬೇಕಾಗಿದ್ದೇನೋ 
ಅವರು ನನ್ನ ಕಿವಿಗೊಂದು ಗುಟ್ಟು ಇಟ್ಟು,
'ಇದನ್ನು ಯಾರಿಗೂ ಹೇಳಬೇಡಿ' ಎಂದರು .
 
ಈ ಕಥೆಯ ದುರಂತವೆಂದರೆ :
ನನಗೆ ಮೊದಲೊಬ್ಬರು ಹೇಳಿದ್ದ ಗುಟ್ಟು,
ನಾನು ಅವಳಿಗೆ ಹೇಳಿದ ಗುಟ್ಟು ,
ಈಗ ನನಗೇ ಬೂಮರಾಂಗ್ ಆಗಿದ್ದು. 
 
ಈಗ ನೀವು ಹೇಳಿ ,
ಹಾಗಾದರೆ ಇಲ್ಲಿ ಗುಟ್ಟು ಬಿಟ್ಟವರ್ಯಾರು ?
 
                                          @ ಶಿವಾ@
    

Sunday, October 24, 2010

ಮತ್ತೊಂದಿಷ್ಟು ಹಾಯ್ಕುಗಳು...



"ಮದು-ವೆ"



ಮಗನಿಗೆ "ಮದ" ಬಂದೇ ಬಿಟ್ಟಿದೆ

ಎಂದು ತಿಳಿದ ತರುವಾಯ

ಅದನ್ನು ನಿಯಂತ್ರಿಸಲು ತಂದೆ ತಾಯಿಗಳು

ಕಂಡುಕೊಡ- "ವೇ"

******************

ಸಂಭಾವನೆ



ನನಗೆ ಆಗಾಗ ದೊರಯುತ್ತದೆ

ಸಂಭಾವನೆ ಏಕೆಂದರೆ

ನಾನು ಬರೆದು ಕಳಿಸುತ್ತೆನೆ

Some-ಭಾವನೆ.

********************



ಇಲ್ಲಾ ಕಣೆ ಇನ್ನು ಸುಮ್ಮನಿರಲು

ಸಾದ್ಯವೇ ಇಲ್ಲ.

ಒಂದೋ ನೀನು ನನ್ನ ಪ್ರೀತಿಸಬೆಕು

ಇಲ್ಲವೆ ನಾನು ಐಶ್ವರ್ಯ ರೈ ಗೆ ಓಕೆ ಅನ್ಬೇಕಾಗುತ್ತೆ .

*****************************



ಹೇಳೆ ಹುಡುಗಿ,

ನೋವೆಲ್ಲ ನನ್ನದೇ ಆಗಿರುವಾಗ,

ಕಶ್ಟಗಳೆಲ್ಲಾ ನಾನೇ ಎದುರಿಸುತ್ತಿರುವಾಗ

ಮತ್ತೇಕೆ ನಿನ್ನ ಕಣ್ಣಲ್ಲಿ ನೀರು ?

****************************



ನೀವೇ ಹೇಳಿ,

ಕಾಮವನ್ನು ಕಾಣದೇ ಮಾಡುವಾಗ

ಪ್ರೇಮವನ್ನು ಕದ್ದು ಮಾಡಿದರೇನು ತಪ್ಪು ?

*****************************



ಮೊನ್ನೆ ರಜೆಗೆಂದು ಊರಿಗೆ ಹೊದಾಗ

ಮೂಲೆಮನೆ ಕೆಲಸದ ಹುಡುಗಿ ಕೇಳಿದಳು

" ಈ ದೀಪಾವಳಿಗೆ ಸಿಟಿನ್ಯಾಗೆ ಹುಡ್ಗೀರ್ ಪ್ಯಾಂಟ್

ಹಾಕ್ತಾರಲ್ಲ ಅಂತದ್ದೊಂದು ಕೊಡಿಸ್ತೀರ ಒಡೆಯ ?

ಗದ್ದೆ ಕುಯ್ಲು  ಮಾಡೊಕೆ ಸ್ಯಾನೆ ಆಗ್ತದೆ

ಜೊತೆಗೆ ನನ್ ಮಗ ಅದನ್ನೆ ಸ್ಕೂಲ್ ಗೂ

ಹಾಕೊಂಡ್ ಹೊಗ್ಬೋದು " ನಾನು ಅವಕ್ಕಾದೆ.

**********************************

                     

                                                *ಶಿವ್ಕುಮಾರ್ ಮಾವಲಿ*