Thursday, January 9, 2014

 ಸ್ಪರ್ಶ ಮಾಂತ್ರಿಕರು         


ಎಲ್ಲರೂ ಸಿದ್ಧರಾಗಿ. ಬರುತ್ತಾರೆ
ಸ್ಪರ್ಶ ಮಾಂತ್ರಿಕರು
ದೂರದ ದೇಶದಿಂದ ಬಂದು
ನಿಮ್ಮನ್ನು ಮುಟ್ಟಿ ,ಮಾಯ ಮಾಡಿಬಿಡುತ್ತಾರೆ
ನಿಮ್ಮೆಲ್ಲ ರೋಗ -ರುಜಿನಗಳನ್ನು ...

ಹೊರಗಿನಿಂದ ಬಂದವರಷ್ಟೇ ಅಲ್ಲ
ನಮ್ಮಲ್ಲಿಯೂ ಈ "ಮುಟ್ಟಿ -ಮಾಯ ಮಾಡುವ"
ಮಂದಿ ಸಾಕಷ್ಟಿದ್ದಾರೆ .
ಮುಟ್ಟಿ  ಯಡವಟ್ಟು ಮಾಡಿಕೊಂಡವರೂ
ಅಲ್ಲಲ್ಲಿ ಸಿಗುತ್ತಾರೆ ,ಸಿಕ್ಕಿಕೊಳ್ಳುತ್ತಲೇ ಇದ್ದಾರೆ .

"ಲಕ್ಷಗಟ್ಟಲೆ ಜನಕ್ಕೆ ಒಮ್ಮೆಲೇ ಮುಟ್ಟಿ
ರೋಗವೆಲ್ಲ ಮಾಯ ಮಾಡಿಬಿಡುತ್ತೇವೆ " ಎನ್ನುತ್ತಾರೆ ಅವರು .
"ಯಾವ ಪವಡವೂ  ಇಲ್ಲ ,ಇದೆಲ್ಲ
ಮತಾಂತರದ ಹಿಂದಿನ ಹುನ್ನಾರ" ಟೀಕಿಸುತ್ತಾರೆ ನಮ್ಮವರು
ಮರೆತಂತೆ ಇಲ್ಲಿಯೇ ಇರುವ 'ಬಾಬಾ' ಗಳನ್ನು .

ಈಗಿಂದೀಗಲೇ ಮುಚ್ಚಿಬಿಡೋಣ ಎಲ್ಲ ದವಾಖನೆಗಳನ್ನು
ಅಟ್ಟಿ ಬಿಡೋಣ ಎಲ್ಲ ರೋಗಿಗಳನ್ನು
ಒಂದೇ ಮೂಟೆಯಲ್ಲಿ ಕಟ್ಟಿ ಇವರ 'ಪವಾಡ ಕಾರ್ಖಾನೆಗಳಿಗೆ '.
ಗುಣಪಡಿಸುವರು ಈ ಸ್ಪರ್ಶ- ಮಾಂತ್ರಿಕರು .


ಇಡೀ ದೇಶಕ್ಕಂಟಿದ ಇಂಥ
ಮೂರ್ಛೆ ರೋಗಗಳನ್ನು ಗುಣಪಡಿಸಲು
ಇನ್ಯಾವ ಮಾಂತ್ರಿಕರು ಬರಬೇಕೋ ???


(ಬೆನ್ನಿಹಿನ್ ಭಾರತಕ್ಕೆ ಬರುವ ವಿವಾದದ ಕುರಿತು ಬರೆದ ಕವನ..)