ಅಮ್ಮ ನೀ ನೆನಪಾಗುತ್ತೀ .....
ಮಹಿಳಾ ಮೀಸಲಾತಿ ವಿರುದ್ಧ ನಾ
ಭಾಷಣ ಬಿಗಿಯುವಾಗಲೆಲ್ಲ ;
ಸ್ತ್ರೀ-ಶೋಷಣೆಗೆ ಗಂಡಸು ಮಾತ್ರ
ಕಾರಣವಲ್ಲ ಎಂದು ನಾ ಅಬ್ಬರಿಸುವಾಗಲೆಲ್ಲ ;
ಅಮ್ಮ ನೀ ನೆನಪಾಗುತ್ತೀ .....
ಆತ್ಮೀಯ ಗೆಳತಿ ತೋರಿಸುತ್ತಿದ್ದ
ಪ್ರೀತಿ ಇನ್ನಿಲ್ಲದಾದಾಗ ;
ಬಸ್ ನಲ್ಲೊಬ್ಬಳು ಚಿಲ್ಲರೆ ತೆಗೆಯಲು
ಬಾಗಿದ್ದಕ್ಕೆ ಸೆರಗು ಜಾರಿದಾಗ ;
ಅಮ್ಮ ನೀ ನೆನಪಾಗುತ್ತೀ .....
ಬಿಕನಿಯಲ್ಲೇ ಬೀದಿಗೆ ಬಂದು
ನರ್ತಿಸುವವರ ಕಂಡಾಗ ;
ಮಜೆಸ್ಟಿಕ್ ಬಳಿಯ ಹೆಣ್ಣೊಂದು
ಹಣೆಯಿಂದಲೇ ಸಿಗ್ನಲ್ ಕೊಟ್ಟು ಕರೆದಾಗ ;
ಹೀಗೆ 'ಸ್ತ್ರೀ ' ಎಂಬ ರೂಪಕ
ಕೇಳಿದಾಗ ಮತ್ತೆ ನೋಡಿದಾಗ
ನೀನೆ ಕಣ್ಮುಂದೆ ನಿಲ್ಲುತ್ತೀಯಮ್ಮ .
ಅಂದ ಹಾಗೆ, ಮೊನ್ನೆ ನಾನು ರಜೆಯಲ್ಲಿ
ಊರಿಗೆ ಬಂದಾಗ ನೀ ಹುಡುಕುತ್ತಿದ್ದ ,
ನಮ್ಮನೆಯ 'ಕ್ಷೀರಮೂಲ ' ಗೌರಿ ಸಿಕ್ಕಳೆ ?
ಯಾರ ತೋಟಕ್ಕೆ, ಕದ್ದು ಮೇಯಲು ಹೋಗಿದ್ದಳವಳು ?
ಅಪ್ಪನಿಂದ ನಿನಗೆ ಬೈಸಲಿಕ್ಕೆ !
ಗೌರಿ ಯಂತ ಹಸು ಕಳೆದು ಹೋದ ದಿನ
ನೀ ಊಟ-ತಿಂಡಿ ,ನೀರು ಕೂಡ ಮುಟ್ಟಿರಲಿಲ್ಲವಲ್ಲ,
ಹಾಗಾಗಿಯೇ ನಿನ್ನ ನೆನಪು
ನನಗೆ ಮತ್ತೆ ಮತ್ತೆ ಕಾಡುತ್ತದೆ ಅಮ್ಮ .
No comments:
Post a Comment