Monday, December 27, 2010

ಹೀಗೊಂದು" HOME ALONE" ಅನುಭವ !!!!!!!ಕೆಲವೊಂದು ವೀಕೆಂಡ್ ಹಾಗೆ ಅನ್ನಿಸುತ್ತದೆ . ಯಾವ ಫ್ರೆಂಡ್ಸ್ ಬೇಡ , ಸಿನಿಮಾ ಬೇಡ ,ಪಾರ್ಟಿ ಬೇಡ ,ಯಾರು ನಮ್ಮನ್ನಎಲ್ಲಿಗೂ ಕರೆಯದಿದ್ದರೆ ಸಾಕಪ್ಪ ಅಂತಾ .ಅದ್ಯಾರೋ ಕವಿ ಮಹಾಶಯ ಇದನ್ನೇ ಇರಬೇಕು "  Lonliness is a bliss "ಅಂತಾ ಹೇಳಿದ್ದು. ಹಾಗೊಂದು ದಿನ ಪೂರ್ತಿ ಅಕ್ಷರಶಃ ಮನೆಯಿಂದ ಒಂದು ಹೆಜ್ಜೆ ಕೂಡ ಹೊರಗೆ ಇಡದೇ ಕಳೆದದ್ದು ಏನೋಒಂಥರ ವಿಚಿತ್ರ ಅನುಭವ. ಈ ದಿನ ಬೆಳಗ್ಗೆ ಮನೆಯವರೆಲ್ಲ ತಂತಮ್ಮ  (ಅ)ಕಾರ್ಯಗಳಿಗೆ ಹೋದಮೇಲೆ ಎಲ್ಲ ಕಿಡಕಿ ಬಾಗಿಲುಮುಚ್ಚಿ  ಒಬ್ಬನೇ ಮನೆಯಲ್ಲಿ ಉಳಿಯುವಂತ ಅವಕಾಶ ಸಿಕ್ಕಿತ್ತು . ಅಬ್ಬಾ! ಮನೆ ಪೂರ್ತಿ ನಂದೆ . ನಿಜ ಹೇಳಬೇಕೆಂದರೆ ನಾನುನೂರಾರು ಜನರ ಹಿಂಡಿನಲ್ಲಿ ಎಷ್ಟು Jolly ಆಗಿ ಇರಬಲ್ಲೇನೋ ಅಷ್ಟೇ ಕುಶಿಯಾಗಿ ಏಕಾಂಗಿಯಾಗಿ ಇರಬಲ್ಲೆ ಎಂಬೊಂದು ಸತ್ಯಗೊತ್ತಾಗಿದ್ದು ಇವತ್ತೇ .ಏನೋ ಒಂದು ತಿಂಡಿ ಮಾಡ್ಕೊಂಡ್ ತಿಂದು , TV ಮುಂದೆ ಕೂತವನು ಜಪ್ಪಯ್ಯ ಅಂದ್ರೂ ಮೇಲೇಳಲಿಲ್ಲ .ಮನಸ್ಸು ಬದಲಾದಂತೆ ಚಾನೆಲ್ change ಮಾಡುತ್ತ, ನ್ಯೂಸ್ ಪೇಪರ್ ಓದಿದೆ.ಬಹುದಿನಗಳ ನಂತರ TV ಲಿ ಫಿಲಂ ನೋಡಿದೆ. ಆದರೆ ಫಿಲಂ ನಲ್ಲಿ ಬರುವ ನವರಸಗಳಿಗೂ ಮುಲಾಜಿಲ್ಲದೆ ಸ್ಪಂದಿಸುವ ಅವಕಾಶ ಸಿಕ್ಕಿದು ಮಾತ್ರ ಇವತ್ತೇ . ಏನೋ ಗೊತ್ತಿಲ್ಲ ಎಲ್ಲರೂ ಇದ್ದಾಗ ಹಾಸ್ಯವು ನಗುತರಿಸುವುದಿಲ್ಲ , ತೀರ ದುಃಖದ ಸನ್ನಿವೇಶವೂ ನಮ್ಮ ಕಣ್ಣಲ್ಲಿನ ಹನಿಯನ್ನು ಬಿಗಿಯಾಗಿ ಹಿಡಿದುಬಿಡುತ್ತದೆ. ಆದರೆ ಈ ದಿನ ಹಾಗಲ್ಲ , "ಈ ಬಂಧನ " ಫಿಲಂ ನೋಡುವಾಗ ಕಣ್ನೀರಿತ್ತಿದ್ದೇನೆ,ಕಾಮಿಡಿ ಟೈಮ್ ನೋಡಿ ಹೊಟ್ಟೆ ಹಿಡಿಯುವಂತೆ ನಕ್ಕುಬಿಟ್ಟಿದ್ದೇನೆ, B4U ಚಾನೆಲ್ ಹಾಕಿಕೊಂಡು ಮೈ ಮನ ಬಿಚ್ಹಿ ಕುಣಿದಾಡಿದ್ದೇನೆ. Times Now ನ' ಅರ್ನಬ್ ಗೋಸ್ವಾಮಿ ' ಯ ವಾಕ್  ಚತುರತೆಗೆ ಚಪ್ಪಾಳೆ ತಟ್ಟಿದ್ದೇನೆ. ಎಷ್ಟೇ JOVIAL ಆಗಿರೋ ಮನುಷ್ಯ ಕೂಡ ಎಲ್ಲರೂ ಇದ್ದಾಗ ಬಚ್ಚಿಡಬೇಕಾದ ಎಲ್ಲ ಭಾವಗಳನ್ನು ಈ ಲೋನ್ಲಿನೆಸ್ ನಲ್ಲಿ ವ್ಯಕ್ತಪಡಿಸುತ್ತಾ ಹಾಯಾಗಿ ಕಳೆದ ಕುಶಿ ನನಗೆ . ಆದರೆ ಏಕಾಂತದಲ್ಲಿ ಮಾತಾಡಬಹುದಾದ ಗೆಳತಿಯೊಂದಿಗೆ ಮಾತ್ರ ಮಾತಾಡಲಾಗಲಿಲ್ಲ . ( ಅದಕ್ಕೆ ಬೇಸರವೂ ಆಗಲಿಲ್ಲವಲ್ಲ ಎಂಬುದು ವಿಶೇಷ ) . ಕೊನೆಯಲ್ಲಿ ರೂಂ ಪೂರ್ತಿ ಕತ್ತಲು ಮಾಡಿಕೊಂಡು ಹಗಲಿನಲ್ಲಿ ,ಈ ಚಳಿಯಲ್ಲಿ ರಗ್ ಹೊದ್ದು ಮಲಗುವುದಿದೆಯಲ್ಲ , ಅದನ್ನ ಅನುಭವಿಯೇ ತೀರಬೇಕು ಅಲ್ವೇ ?? .  ಇದಾದಮೇಲೆ evening walk ಹೋಗಿ ರೋಡ್ ಸೈಡ್ ಲ್ಲಿ ' ಪಾನಿಪುರಿ ' ತಿಂದು ಬಂದೆ ನೋಡಿ ,ಅಲ್ಲಿಗೆ ಇದೊಂದು ಪಕ್ಕಾ 'ಸ್ಪೆಷಲ್ ಡೇ " ಆಗೆಬಿಟ್ಟಿತು. ಕೆಲವೊಮ್ಮೆ ಎಲ್ಲರೂ ಇದ್ದು ಲೋನ್ಲಿ ಅನ್ನಿಸಿರುತ್ತದೆ ಆದರೆ ಈ ದಿನ ಏಕಾಂಗಿ ಯಾಗಿದ್ದ  ದಿನ ಕೊಟ್ಟ ಕುಶಿ ಮಾತ್ರ Unforgettable . ಅದೇ ಔಟಿಂಗ್ , ಪಾರ್ಟಿ, ಡಿಜೆ , ಬೂಜ್ , ಸಿನಿಮಾ , ನಾಟಕ , ಪಬ್ಬು , ಬಾರ್ , ಕಾಫಿ ಡೇ, ಸರಸ ,ಪ್ರೀತಿ-ಪ್ರೇಮ . ಕಾಮ. ಕರ್ಮ- ಈ ಎಲ್ಲ ಸಂಗತಿಗಳನ್ನು ಹೊರತಾಗಿಯೂ ಇಂತ ಸಂಭ್ರಮವೊಂದು ನನಗೆ ನನ್ನಿಂದಲೇ ಸಿಗಬಹುದು ಅಂತ ಗೊತ್ತಾದ ಈ ದಿನಕ್ಕೆ ನನ್ನ ಅಭಿನಂದನೆಗಳು ...ಅದಕ್ಕಾಗೆ ಅನ್ನಿಸುತ್ತೆ " learn to spend your personal time for yourself " ಅಂತ ಹೇಳಿರೋದು . ಅದೇನೇ ಇರಲಿ ನಾನಂತೂ ಮತ್ತೊಂದು ಅಂತಾ ದಿನಕ್ಕಾಗಿ ಕಾಯ್ತಾ ಇರ್ತೀನಿ ....... ನೀವು try ಮಾಡಿ , ಸುಳ್ಳಾದರೆ ಆಮೇಲೆ ನನಗೆ ಹೇಳ್ರಿ . ಏನಂತೀರಿ ???
ಏನಂತೀರಿ ????????


                                                                    @ ಶಿವೂ @

No comments:

Post a Comment