Wednesday, August 11, 2010

ಸುಮ್ನೆ ಒಂದು ಕವನ ಅಂತಾ....!!

ಅದೇಕೋ ಅವಳೊಂದು

ಚಿಕ್ಕ ಸರ್ಕಲ್ ಬರೆದುಕೊಂಡು
ನನ್ನನ್ನು ಹೊರದೂಡಿದಳು.


ನಾನು,,,,,,
ದೊಡ್ದದೊಂದು ಸರ್ಕಲ್ ಬರೆದು
ಅವಳನ್ನು ಅದರೊಳಗೆ ಎಳೆದುಕೊಂಡೆ.


ಅದೆಶ್ಟು ದೊಡ್ಡದೆಂದರೆ ,
ಅದರೊಳಗೆ ಅವಳೆಶ್ಟೇ ಚಿಕ್ಕ ಚಿಕ್ಕ ಸರ್ಕಲ್
ಬರೆದುಕೊಂಡು ನನ್ನ ಹೊರಹಾಕಲೆತ್ನಿಸಿದರೂ
ನನ್ನ ಸರ್ಕಲ್ ನ ಪರಿಮಿತಿಯಲ್ಲೇ ಅವಳಿರುತ್ತಾಳೆ.


ಅಂದಹಾಗೆ ಇದು ನಾನವಳನ್ನು
ಪ್ರೀತಿಸಿದ ಬಗೆಯಲ್ಲ ...
ಮೋಸ ಮಾಡಿ ಹೊರಟ ಅವಳನ್ನು
ಬಂದಿಸಿಟ್ಟ ಪರಿ ಇದು ........


- ಶಿವಕುಮಾರ್ ಮಾವಲಿ.

No comments:

Post a Comment