Saturday, December 7, 2013

ಬೇಕಾಗಿದ್ದಾರೆ ...!!

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ
ಸ್ವಂತ ಮನೆ ಹೊಂದಿರುವ
ಅಪ್ಪ ಅಮ್ಮನ ಒಬ್ಬನೇ ಮಗ
ಎಸೆಸೆಲ್ಸಿ Appeared, **
ಹುಡುಗನಿಗೆ ತಿಂಗಳಿಗೆ 4೦ ಸಾವಿರ ವರಮಾನವಿದೆ .
ಓದುತ್ತಿರುವ ಹುಡುಗಿಯಾದರೂ ಪರವಾಗಿಲ್ಲ.
ಮದುವೆ  ನಂತರವೂ  ಓದು ಮುಂದುವರೆಸಬಹುದು **
ಸರಳ ಮದುವೆ .. ವರಧಕ್ಷಿಣೆ ಇಲ್ಲ ,
ಎಲ್ಲ ಖರ್ಚನ್ನೂ ಹುಡುಗನೇ ನೋಡಿಕೊಳ್ಳುತ್ತಾನೆ ...


ಬ್ರಾಹ್ಮಣ,ಲಿಂಗಾಯತ ,ಒಕ್ಕಲಿಗ
ಕುರುಬ ,ಬಲಿಜಿಗ ,ಮರಾಠ
ದೇವಾಂಗ,ಯಾದವ ,ಬೆಸ್ತ,ರೆಡ್ಡಿ
ಗಾಣಿಗ , ನಾಯಕ, ಛಲವಾದಿ ,ಮಾದಿಗ
ಯಾವುದೇ ಜಾತಿ , ಪಂಗಡದ
ಮೊದಲನೇ ಅಥವಾ ಎರಡನೇ ಸಂಭಂದಕ್ಕೆ **
ಇಂಜಿನಿಯರ್ ಇಲ್ಲವೇ 4lakh / Annum ಆದಾಯ
ಇರುವ ಯಾವುದೇ ಖಾಸಗಿ ಕಂಪನಿಯ  ಉದ್ಯೋಗಿಗಳು
ಸಂಪರ್ಕಿಸಬಹುದು : 99 0 0 9 9 1 1 2 2 .

ಸಾಕಷ್ಟು ಓದಿಕೊಂಡಿರುವ , ವಯಸ್ಸು 32 ,
ಎತ್ತರ 5.8 ", ಸ್ವ  ಉದ್ಯೋಗವಿರುವ ಸುಂದರ
ಸಭ್ಯ ಹುಡುಗಿಗೆ,ಸುಂದರವಾದ ವಧು ಬೇಕಿದೆ .
( ಮಾನವ ಧರ್ಮಕ್ಕೆ ಜಯವಾಗಲಿ )

5 ಎಕರೆ ನೀರಾವರಿ ಜಮೀನು ಇರುವ
ಸುಂದರ ಒಕ್ಕಲಿಗ ,( ತಂದೆ ತಾಯಿ ಇಲ್ಲ !)
ಹಳ್ಳಿಯಲ್ಲೇ ನೆಲೆಸಲು,ಸ್ವಜಾತಿಯ
ಕಟ್ಟಾ ಸಂಪ್ರದಾಯಸ್ತ **
ಹುಡುಗಿ ಬೇಕಾಗಿದೆ ...

ನಲವತ್ತು ವಯಸ್ಸಿನ ಎರಡು ಮಕ್ಕಳನ್ನು **
ಹೊಂದಿರುವ , ವಿಚ್ಚೇದಿತ ಸುಂದರ ಮಹಿಳಿಗೆ
45 -60 ವರ್ಷದೊಳಗಿನ ಬಾಳ ಸಂಗಾತಿ ಬೇಕು
ಕೇವಲ ಸಿರಿವಂತರು ಮಾತ್ರ ಸಂಪರ್ಕಿಸತಕ್ಕದ್ದ್ದು .

ಈ ಜಾಹಿರಾತಿನಲ್ಲಿ ಬರುವ ** ಗಳನ್ನು
'ನಿಯಮಗಳು ಪರಿಸ್ತಿತಿಗೆ ತಂಕ್ಕಂತೆ ಅನ್ವಯ '
ಎಂದು ಓದಿಕೊಳ್ಳುವುದು ... ಇಲ್ಲಿರುವ ಯಾವುದೇ
ವ್ಯಕ್ತಿಯ ಅರ್ಹತೆ, ಮಾನದಂಡಗಳಿಗೆ
ನಾವು ಜವಾಬ್ದಾರರಲ್ಲ ......
ಸಮಾಜದ ಸ್ವಾಸ್ಥ್ಯವೇ ನಮ್ಮ ಉದ್ದೇಶ .

We wish our society
" A happy married life "

                
                                                          ಶಿವಕುಮಾರ್ ಮಾವಲಿ

Monday, February 11, 2013

" some -ಬಂಧ ..!  "

ಬುದ್ಧಿ ಬಂದಾಕ್ಷಣ
ನನ್ನ ಮೊದಲ ತೀರ್ಮಾನ ಇದಾಗಿತ್ತು ;
' ನನಗೆ ಯಾವ ಸಂಬಂಧಗಳ ಸರಪಳಿಯೂ
ಬೇಡವೇ ಬೇಡ ... '

ಹಾಗಂದುಕೊಂಡೇ ನನ್ನಷ್ಟಕ್ಕೆ ನಾನಿದ್ದೆ.
ಒಂಟಿತನಕ್ಕೆ ನಂಟರ ಹಂಗೇಕೆ?
ಬದುಕು ಸಾಗಿತ್ತು,ಪ್ರಶ್ನೆಗಳ ಕ್ರೌರ್ಯಕ್ಕೆ
ನಲುಗುತ್ತ ,ನವೆಯ ನುಂಗುತ್ತ ...

ಅಕ್ಕ ಮನೆ ಬಿಟ್ಟವಳೆಂಬ ಕಾರಣ
ತಂಗಿಯ ಮದುವೆಗೆ ಕಾಲ ಹರಣ .
ಅವಳಿಗೊಂದು ಆಸರೆ ಮಾಡಿಟ್ಟು
ನನ್ನ ಪಾಡಿಗೆ ನಾನಿದ್ದುದು ಇತಿಹಾಸ .

ತಂಗಿಯ ಮದುವೆಯಾಯ್ತು
ನಾನು ಅತ್ತಿಗೆಯಾದೆ ,
ಅವಳಿಗೆ ಮಕ್ಕಳಾದವು ,ನಾನು ನಿರ್ಲಿಪ್ತವಾಗಿದ್ದೆ.
ಆದರೆ 'ದೊಡ್ಡಮ್ಮ'ನಾಗಿಯೇ ಬಿಟ್ಟಿದ್ದೆನಲ್ಲ ?

ಆಗಲೂ  ನಾನು ಯಾರ ಸಂಪರ್ಕಕ್ಕೂ
ಬಾರದೆ ಇದ್ದೆನೆಂಬುದು ಸತ್ಯ.
ಅವಳ ಮಗಳು ಬೇಗ ಬೆಳೆದಳಿರಬೇಕು
ಅವಳದ್ದೂ ಮದುವೆ - ಮಕ್ಕಳು ...

ಕೌಮಾರ್ಯವಿಲ್ಲದೆಯೇ ಕುಮಾರಿ,

ಮದುವೆ -ಗಂಡ -ಮಕ್ಕಳಿಲ್ಲದೆಯೇ ಅಜ್ಜಿ ...
ಹೇಗೆ ಕಳಚುವುದು ಈ ಬೇಡದ 'ಬಂಧ'ಗಳನ್ನು ?
ಒಳಗಿದ್ದೇನೋ ,ಹೊರಗಿದ್ದೇನೋ ಎಂಬುದೇ
ಅರ್ಥವಾಗದ ಈ ವಿಷ -ವರ್ತುಲವನ್ನು?!

                                                -ಆರ್ .ಎಮ್ ಶಿವಕುಮಾರ್ ಮಾವಲಿ

                   mavalihere@gmail.com