Monday, December 27, 2010

ಹೀಗೊಂದು" HOME ALONE" ಅನುಭವ !!!!!!!



ಕೆಲವೊಂದು ವೀಕೆಂಡ್ ಹಾಗೆ ಅನ್ನಿಸುತ್ತದೆ . ಯಾವ ಫ್ರೆಂಡ್ಸ್ ಬೇಡ , ಸಿನಿಮಾ ಬೇಡ ,ಪಾರ್ಟಿ ಬೇಡ ,ಯಾರು ನಮ್ಮನ್ನಎಲ್ಲಿಗೂ ಕರೆಯದಿದ್ದರೆ ಸಾಕಪ್ಪ ಅಂತಾ .ಅದ್ಯಾರೋ ಕವಿ ಮಹಾಶಯ ಇದನ್ನೇ ಇರಬೇಕು "  Lonliness is a bliss "ಅಂತಾ ಹೇಳಿದ್ದು. ಹಾಗೊಂದು ದಿನ ಪೂರ್ತಿ ಅಕ್ಷರಶಃ ಮನೆಯಿಂದ ಒಂದು ಹೆಜ್ಜೆ ಕೂಡ ಹೊರಗೆ ಇಡದೇ ಕಳೆದದ್ದು ಏನೋಒಂಥರ ವಿಚಿತ್ರ ಅನುಭವ. ಈ ದಿನ ಬೆಳಗ್ಗೆ ಮನೆಯವರೆಲ್ಲ ತಂತಮ್ಮ  (ಅ)ಕಾರ್ಯಗಳಿಗೆ ಹೋದಮೇಲೆ ಎಲ್ಲ ಕಿಡಕಿ ಬಾಗಿಲುಮುಚ್ಚಿ  ಒಬ್ಬನೇ ಮನೆಯಲ್ಲಿ ಉಳಿಯುವಂತ ಅವಕಾಶ ಸಿಕ್ಕಿತ್ತು . ಅಬ್ಬಾ! ಮನೆ ಪೂರ್ತಿ ನಂದೆ . ನಿಜ ಹೇಳಬೇಕೆಂದರೆ ನಾನುನೂರಾರು ಜನರ ಹಿಂಡಿನಲ್ಲಿ ಎಷ್ಟು Jolly ಆಗಿ ಇರಬಲ್ಲೇನೋ ಅಷ್ಟೇ ಕುಶಿಯಾಗಿ ಏಕಾಂಗಿಯಾಗಿ ಇರಬಲ್ಲೆ ಎಂಬೊಂದು ಸತ್ಯಗೊತ್ತಾಗಿದ್ದು ಇವತ್ತೇ .ಏನೋ ಒಂದು ತಿಂಡಿ ಮಾಡ್ಕೊಂಡ್ ತಿಂದು , TV ಮುಂದೆ ಕೂತವನು ಜಪ್ಪಯ್ಯ ಅಂದ್ರೂ ಮೇಲೇಳಲಿಲ್ಲ .ಮನಸ್ಸು ಬದಲಾದಂತೆ ಚಾನೆಲ್ change ಮಾಡುತ್ತ, ನ್ಯೂಸ್ ಪೇಪರ್ ಓದಿದೆ.ಬಹುದಿನಗಳ ನಂತರ TV ಲಿ ಫಿಲಂ ನೋಡಿದೆ. ಆದರೆ ಫಿಲಂ ನಲ್ಲಿ ಬರುವ ನವರಸಗಳಿಗೂ ಮುಲಾಜಿಲ್ಲದೆ ಸ್ಪಂದಿಸುವ ಅವಕಾಶ ಸಿಕ್ಕಿದು ಮಾತ್ರ ಇವತ್ತೇ . ಏನೋ ಗೊತ್ತಿಲ್ಲ ಎಲ್ಲರೂ ಇದ್ದಾಗ ಹಾಸ್ಯವು ನಗುತರಿಸುವುದಿಲ್ಲ , ತೀರ ದುಃಖದ ಸನ್ನಿವೇಶವೂ ನಮ್ಮ ಕಣ್ಣಲ್ಲಿನ ಹನಿಯನ್ನು ಬಿಗಿಯಾಗಿ ಹಿಡಿದುಬಿಡುತ್ತದೆ. ಆದರೆ ಈ ದಿನ ಹಾಗಲ್ಲ , "ಈ ಬಂಧನ " ಫಿಲಂ ನೋಡುವಾಗ ಕಣ್ನೀರಿತ್ತಿದ್ದೇನೆ,ಕಾಮಿಡಿ ಟೈಮ್ ನೋಡಿ ಹೊಟ್ಟೆ ಹಿಡಿಯುವಂತೆ ನಕ್ಕುಬಿಟ್ಟಿದ್ದೇನೆ, B4U ಚಾನೆಲ್ ಹಾಕಿಕೊಂಡು ಮೈ ಮನ ಬಿಚ್ಹಿ ಕುಣಿದಾಡಿದ್ದೇನೆ. Times Now ನ' ಅರ್ನಬ್ ಗೋಸ್ವಾಮಿ ' ಯ ವಾಕ್  ಚತುರತೆಗೆ ಚಪ್ಪಾಳೆ ತಟ್ಟಿದ್ದೇನೆ. ಎಷ್ಟೇ JOVIAL ಆಗಿರೋ ಮನುಷ್ಯ ಕೂಡ ಎಲ್ಲರೂ ಇದ್ದಾಗ ಬಚ್ಚಿಡಬೇಕಾದ ಎಲ್ಲ ಭಾವಗಳನ್ನು ಈ ಲೋನ್ಲಿನೆಸ್ ನಲ್ಲಿ ವ್ಯಕ್ತಪಡಿಸುತ್ತಾ ಹಾಯಾಗಿ ಕಳೆದ ಕುಶಿ ನನಗೆ . ಆದರೆ ಏಕಾಂತದಲ್ಲಿ ಮಾತಾಡಬಹುದಾದ ಗೆಳತಿಯೊಂದಿಗೆ ಮಾತ್ರ ಮಾತಾಡಲಾಗಲಿಲ್ಲ . ( ಅದಕ್ಕೆ ಬೇಸರವೂ ಆಗಲಿಲ್ಲವಲ್ಲ ಎಂಬುದು ವಿಶೇಷ ) . ಕೊನೆಯಲ್ಲಿ ರೂಂ ಪೂರ್ತಿ ಕತ್ತಲು ಮಾಡಿಕೊಂಡು ಹಗಲಿನಲ್ಲಿ ,ಈ ಚಳಿಯಲ್ಲಿ ರಗ್ ಹೊದ್ದು ಮಲಗುವುದಿದೆಯಲ್ಲ , ಅದನ್ನ ಅನುಭವಿಯೇ ತೀರಬೇಕು ಅಲ್ವೇ ?? .  ಇದಾದಮೇಲೆ evening walk ಹೋಗಿ ರೋಡ್ ಸೈಡ್ ಲ್ಲಿ ' ಪಾನಿಪುರಿ ' ತಿಂದು ಬಂದೆ ನೋಡಿ ,ಅಲ್ಲಿಗೆ ಇದೊಂದು ಪಕ್ಕಾ 'ಸ್ಪೆಷಲ್ ಡೇ " ಆಗೆಬಿಟ್ಟಿತು. ಕೆಲವೊಮ್ಮೆ ಎಲ್ಲರೂ ಇದ್ದು ಲೋನ್ಲಿ ಅನ್ನಿಸಿರುತ್ತದೆ ಆದರೆ ಈ ದಿನ ಏಕಾಂಗಿ ಯಾಗಿದ್ದ  ದಿನ ಕೊಟ್ಟ ಕುಶಿ ಮಾತ್ರ Unforgettable . ಅದೇ ಔಟಿಂಗ್ , ಪಾರ್ಟಿ, ಡಿಜೆ , ಬೂಜ್ , ಸಿನಿಮಾ , ನಾಟಕ , ಪಬ್ಬು , ಬಾರ್ , ಕಾಫಿ ಡೇ, ಸರಸ ,ಪ್ರೀತಿ-ಪ್ರೇಮ . ಕಾಮ. ಕರ್ಮ- ಈ ಎಲ್ಲ ಸಂಗತಿಗಳನ್ನು ಹೊರತಾಗಿಯೂ ಇಂತ ಸಂಭ್ರಮವೊಂದು ನನಗೆ ನನ್ನಿಂದಲೇ ಸಿಗಬಹುದು ಅಂತ ಗೊತ್ತಾದ ಈ ದಿನಕ್ಕೆ ನನ್ನ ಅಭಿನಂದನೆಗಳು ...ಅದಕ್ಕಾಗೆ ಅನ್ನಿಸುತ್ತೆ " learn to spend your personal time for yourself " ಅಂತ ಹೇಳಿರೋದು . ಅದೇನೇ ಇರಲಿ ನಾನಂತೂ ಮತ್ತೊಂದು ಅಂತಾ ದಿನಕ್ಕಾಗಿ ಕಾಯ್ತಾ ಇರ್ತೀನಿ ....... ನೀವು try ಮಾಡಿ , ಸುಳ್ಳಾದರೆ ಆಮೇಲೆ ನನಗೆ ಹೇಳ್ರಿ . ಏನಂತೀರಿ ???
ಏನಂತೀರಿ ????????


                                                                    @ ಶಿವೂ @

Wednesday, December 22, 2010

When he retires from cricket, .........!!!!

Let Him Play as long as he wants .........

" I know him, he is is not after the records but they do. I still remember how sad he was when India lost a test match in Chennai.1989 against Pakistan though he hits a tremendous century. Me and Waqar always wanted to bowl him because it was a prized wicket for us . When he hit his 50th test ton, at the age of 37, it shows the commitment and passion he has towards cricket and am sure it will continue as long as he plays cricket. He is not only a good cricketer but a gentle human being. For all those who says he plays for records, I have to tell them that " hey common people grow up understand cricket better. because if he would have been not played such innings India would have been beaten even worst". 

If  we see the pace he is going at the age of 37,sure we have yet more things to come upon to admire this superb Player. So  I request Indian cricket committee and selection board that please please please don't tell him to retire.
Let him play as long as he wants........... and  I am very sure that He will make an exuberant exit with honor and pride when he wishes to move ....

I must say this ." When this man exits from the world of cricket , the game of cricket will lose lots of it's fans...


( This is  the summary of what Wassim Akram ,former skipper of Pakistan opined on "THE GOD OF CRICKET ")


" GO SACHIN .... GO CRICKET..... GO INDIA .... "